ಆತ್ಮೀಯರೇ
ದಿನಾಂಕ: 16.03.2025 ರಂದು ನಡೆಯುವ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯೊಳಗಾಗಿ ಈ ಮೇಲ್ಕಂಡ ಮಾಹಿತಿಯನ್ನು ಅಂತಿಮ ಮಾಡಿಕೊಂಡು ಅಂದು ಸಭೆಯಲ್ಲಿ ತಪ್ಪದೇ ಕಡ್ಡಾಯವಾಗಿ ಸದರಿ ಮಾಹಿತಿಯನ್ನು ನೀಡಿ ಸ್ವೀಕೃತಿ ಪಡೆಯಲು ಕೋರಿದೆ.
ಸದರಿ ಮಾಹಿತಿಯನ್ನು ನೋಂದಣಿ ಇಲಾಖೆಗೆ ಬೈಲಾ ನಿಯಮಸಾರ ಸಲ್ಲಿಸಬೇಕಾಗಿದೆ.
ಸೂಚನೆ : ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಸಂಘದ ಎಲ್ಲಾ ಹಂತದ ಪದಾಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು, ಗೌರವಾಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಎಲ್ಲಾ ತಾಲ್ಲೂಕುಗಳ ತಾಲ್ಲೂಕು ಅಧ್ಯಕ್ಷರು ಕಡ್ಡಾಯವಾಗಿ ಭಾಗವಹಿಸಬೇಕಾಗಿದೆ. ಇವರ ಜೊತೆಯಲ್ಲಿ ರಾಜ್ಯ ಸಂಘದಲ್ಲಿ ತಮ್ಮ ಜಿಲ್ಲೆಯಿಂದ ರಾಜ್ಯ ಪದಾಧಿಕಾರಿಗಳಾಗುವವರು ಸದರಿ ಸಭೆಯಲ್ಲಿ ಭಾಗವಹಿಸಬೇಕು ಅಂದೇ ರಾಜ್ಯ ಸಂಘದ ಪದಾಧಿಕಾರಿಗಳನ್ನು ಘೋಷಿಸಲಾಗುವುದು. ಆದ ಕಾರಣ ಜಿಲ್ಲಾಧ್ಯಕ್ಷರು/ಜಿಲ್ಲಾ ಕಾರ್ಯದರ್ಶಿ ರವರು ಸದರಿಯವರಿಗೆ ಮಾಹಿತಿ ನೀಡಿ ಸಭೆಯಲ್ಲಿ ಭಾಗವಸಲು ಕ್ರಮವಹಿಸುವುದು.
ಈಗಾಗಲೇ ಜಿಲ್ಲೆಯಿಂದ ರಾಜ್ಯ ಪರಿಷತ್ ಸ್ಥಾನಕ್ಕೆ ಪುರುಷರು ಆಯ್ಕೆಯಾಗಿದ್ದರೆ ಅಂತಹ ಜಿಲ್ಲೆಯಿಂದ ಕಡ್ಡಾಯವಾಗಿ ಮಹಿಳೆಯರಿಗೆ ರಾಜ್ಯ ಪದಾಧಿಕಾರಿ ಹುದ್ದೆಗೆ ಆಯ್ಕೆ ಮಾಡಿ ನೀಡುವುದು.
ಧನ್ಯವಾದಗಳು
ಚೌಡಪ್ಪ ಎಸ್
ರಾಜ್ಯಾಧ್ಯಕ್ಷರು
=========================================
ಶಿಕ್ಷಕರ ಸದನದಲ್ಲಿ ಕೊಠಡಿಗಳನ್ನು ರಾಜ್ಯ ಸಂಘದ ವತಿಯಿಂದ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ್ ಬಾಬು ಸರ್ ನಿಗಧಿಪಡಿಸಿದ್ದು ದೂರದಿಂದ ಬಂದತಹ ಪದಾಧಿಕಾರಿಗಳು ತಂಗಲು ಅಥವಾ Freshup ಆಗಲು ಅವಕಾಶವಿದೆ. ಅವಶ್ಯಕತೆ ಇರುವ ಪದಾಧಿಕಾರಿಗಳು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರವಿಪ್ರಕಾಶ್ ಅಥವಾ ಬೆಂಗಳೂರು ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಬಾಬು ರವರನ್ನು ಸಂಪರ್ಕಿಸಲು ಕೋರಿದೆ
ಶ್ರೀ ರವಿಪ್ರಕಾಶ್
ರಾಜ್ಯ ಪ್ರಧಾನ ಕಾರ್ಯದರ್ಶಿ
70196 37713
No comments:
Post a Comment