ಸಂಪರ್ಕಿಸಿ

  ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು 

ಜಿಲ್ಲಾ & ತಾಲ್ಲೂಕುಗಳಲ್ಲಿ ಸಂಘ ರಚನೆ ಕುರಿತು

ಆತ್ಮೀಯರೇ

 ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ  ಸೇವೆಸಲ್ಲಿಸುತ್ತಿರುವ ಸರ್ಕಾರಿ ಮತ್ತು ಅನುದಾನಿತ  ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ವಸತಿ ಶಿಕ್ಷಣ ಸಂಸ್ಥೆಗಳು,ಹಾಗೂ ಶಿಕ್ಷಣ ಇಲಾಖೆಯ ಕಛೇರಿಗಳಾದ B.E.O, BRC, DDPI, DiET,  PU DDPI, ACPi, CPI,DSERT, SSLC Board, RMSA,ಮುಂತಾದ ಶಾಲಾ ಶಿಕ್ಷಣ ಇಲಾಖೆಯ  ಕಛೇರಿಗಳಲ್ಲಿ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಉಪನ್ಯಾಸಕರು, ಅಧಿಕಾರಿ ವರ್ಗ ಹಾಗೂ ಎಲ್ಲಾ ಹಂತದ ಡಿ ಗ್ರೂಪ್ ನಿಂದ ನಿರ್ದೇಶಕರ ವರೆಗಿನ ನೌಕರರನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು ಹೆಸರಿನಲ್ಲಿ ಅಧಿಕೃತವಾಗಿ ನೋಂದಣಿ ಮಾಡಲಾಗಿದೆ.

ಸಂಘದ ಬೈಲಾ ನಿಯಮಾನುಸಾರ ಜಿಲ್ಲೆ  ಮತ್ತು ತಾಲ್ಲೂಕುಗಳಲ್ಲಿ  ಜಿಲ್ಲಾ & ತಾಲ್ಲೂಕು ಸಂಘವನ್ನು ನಿಯಮಾನುಸಾರ ಸಾಮಾಜಿಕ ನ್ಯಾಯಾಲಯದ ಅಡಿಯಲ್ಲಿ ಪಾರದರ್ಶಕತೆಯಿಂದ ಪದಾಧಿಕಾರಿಗಳನ್ನು ನೇಮಕ ಮಾಡಿ ಸಂಘದ   ಪ್ರಾರಂಭಿಸಲಾಗುವುದು.

ಪ್ರತಿ ಜಿಲ್ಲೆಯಿಂದ ರಾಜ್ಯ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತಹ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯರಿಗೆ ರಾಜ್ಯ ಸಂಘದಲ್ಲಿ ಅವಕಾಶ ನೀಡಲಾಗುವುದು (ಒಬ್ಬರು ರಾಜ್ಯ ಪರಿಷತ್ತು ಒಬ್ಬರಿಗೆ ಪದಾಧಿಕಾರಿ ಹುದ್ದೆ ನೀಡಲಾಗುವುದು)

ಸಂಘ ರಚನೆ ಮಾಡುವ ಸಮಯದಲ್ಲಿ ಸಾಧ್ಯವಾದಷ್ಟು ಈ ಕೆಳಕಂಡ ಅಂಶಗಳನ್ನು ಪಾಲಿಸಿ

 1.ಸಂಘಟನೆಯಲ್ಲಿ ನಿಸ್ವಾರ್ಥ ಸೇವೆಯಿಂದ ಸಕ್ರೀಯವಾಗಿ ಕೆಲಸ ಮಾಡುವವರಿಗೆ ಆದ್ಯತೆ ಇರಲಿ.

2. ನಿವೃತ್ತಿಗೆ ಕನಿಷ್ಟ 3 ವರ್ಷಗಳಿಗಿಂತ ಕಡಿಮೆ ವಯೋಮಿತಿ ಇರುವವರಿಗೆ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆ ಬೇಡ

3. ಪ್ರಮುಖ ಹುದ್ದೆಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ವಸತಿ, ಅನುದಾನಿತ, beo/DDPi ಕಛೇರಿ, ಹಾಗೂ ಮಹಿಳೆಯರನ್ನು ಒಳಗೊಂಡಂತೆ ಸಾಮಾಜಿಕ ನ್ಯಾಯದಡಿ ಆಯ್ಕೆ ಮಾಡಲಾಗುವುದು

4. ಮಹಿಳೆಯರಿಗೆ 30% ಅವಕಾಶ 

 ವಿಶೇಷ ಸೂಚನೆ  ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾವಾರು ವ್ಯಾಟ್ಸ್ ಆಫ್ ಗ್ರೂಪ್ ಅನ್ನು ಸಂಘದ ಹೆಸರಿನಲ್ಲಿ ರಚಿಸಲಾಗಿದೆ ಸದರಿ ಜಿಲ್ಲಾ ಗ್ರೂಪಿನಲ್ಲಿ ತಮ್ಮ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ  ಎಲ್ಲಾ ಹಂತದ ಖಾಯಂ ನೌಕರರನ್ನು ಸದರಿ ತಮ್ಮ ಜಿಲ್ಲಾ ಗ್ರೂಪಿನಲ್ಲಿ ಸೇರ್ಪಡೆಯಾಗುವುದು/ ಸೇರಿಸುವುದು. 

ಗ್ರೂಪಿನಲ್ಲಿ ಸೇರ್ಪಡೆಗೆ ಸಂಬಂಧಿಸಿದಂತೆ ಸದರಿ ಲಿಂಕ್ ಅನ್ನು ತಮ್ಮ ಜಿಲ್ಲೆಯ ಗ್ರೂಪ್ ಗಳಲ್ಲಿ ಶೇರ್ ಮಾಡುವ ಮೂಲಕ join ಆಗುವಂತೆ ತಿಳಿಸುವುದು.

ಶೀಘ್ರವಾಗಿ ತಮ್ಮ ಜಿಲ್ಲೆ & ತಾಲ್ಲೂಕುಗಳಲ್ಲಿ ಸಂಘ ರಚನೆ ಮಾಡಲಾಗುವುದು.

ತಮ್ಮೆಲ್ಲರ ಸಹಕಾರ ಇರಲಿ ಸ್ವ ಇಚ್ಛೆಯಿಂದ ನಿಸ್ವಾರ್ಥವಾಗಿ ಸಕ್ರಿಯವಾಗಿ ಸಂಘಟನೆಯಲ್ಲಿ ಸೇವೆ ಮಾಡುವವರು ಮುಂದೆ ಬನ್ನಿ


ಧನ್ಯವಾದಗಳು



3 comments:

  1. ವಂದನೆಗಳು ಸರ್
    ಅನುದಾನಿತ ಶಾಲಾ ಶಿಕ್ಷಕರು ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಲು. ಅವಕಾಶ ಇದಿಯಾ 🙏

    ReplyDelete
  2. PLEASE TAKE ADVANTAGE OF MY BLOG: KCSRS.BLOGSPOT.COM

    ReplyDelete

NEW UPDATES JOIN WITH KSSEDEA