ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಭಾವಚಿತ್ರಗಳು

 ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು

 ಕೃತಜ್ಞತೆಗಳೊಂದಿಗೆ ಧನ್ಯವಾದಗಳು

16-03-2025 ಕಾರ್ಯಕ್ರಮದ ಯಶಸ್ವಿಗೆ ಕಾರಣ ಕರ್ತರಾದ ಸಭೆಯಲ್ಲಿ ಭಾಗವಹಿಸಿ ಬಹಳ ಶಿಸ್ತು, ಸಹನೆ, ಸಮಯ ಪಾಲನೆಯನ್ನು ಮೆರೆದು ಯಶಸ್ವಿಗೊಳಿಸಿದ ರಾಜ್ಯದ ಎಲ್ಲಾ ಜಿಲ್ಲೆ & ತಾಲ್ಲೂಕು  ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು, ಪ್ರತಿನಿಧಿಗಳನ್ನೊಳಗೊಂಡಂತೆ ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಧನ್ಯವಾದಗಳು

ಸಭೆಯ ಸಿದ್ದತೆ ಮತ್ತು ಹಲವು ಕರ್ತವ್ಯಗಳನ್ನೊಳಗೊಂಡಂತೆ ಸಕ್ರಿಯವಾಗಿ ನಿರ್ವಹಿಸಿದ ಬೆಂಗಳೂರು  ದಕ್ಷಿಣ ಮತ್ತು ಉತ್ತರ ಜಿಲ್ಲೆ ಮತ್ತು ತಾಲ್ಲೂಕು ಸಂಘಗಳ ಎಲ್ಲಾ ಹಂತದ ಪದಾಧಿಕಾರಿಗಳಿಗೆ  ಧನ್ಯವಾದಗಳು 

ಊಟದ ವ್ಯವಸ್ಥೆಯ ಜವಾಬ್ದಾರಿ ವಹಿಸಿ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಿದ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಸದಾನಂದ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಮತ್ತು ತಂಡದವರಿಗೆ  ಹಾಗೂ ಸಭೆ ಹಾಲ್ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ ಪದಾಧಿಕಾರಿಗಳಿಗೆ ತಂಗಲು, ಸಿದ್ದತೆಯಾಗಿ ಬರಲು ಕೊಠಡಿ ವ್ಯವಸ್ಥೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನೆರವೇರಿಸಿದ ಬೆಂಗಳೂರು ಉತ್ತರ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಬಾಬು ಮತ್ತು ತಂಡದವರಿಗೆ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಸಹಕರಿಸಿ ಸಹಕಾರನೀಡಿದ ಬೆಂಗಳೂರು ದಕ್ಷಿಣ ಜಿಲ್ಲೆಯ ಕಾರ್ಯಾಧ್ಯಕ್ಷರು, ಕೆ.ಜಿ.ಎಫ್ ತಾಲ್ಲೂಕು ಅಧ್ಯಕ್ಷರಾದ ನಾರಾಯಣಸ್ವಾಮಿ ರವರಿಗೂ ವೇದಿಕೆ ಜವಾಬ್ದಾರಿ ನಿರ್ವಹಿಸಿ ಯಶಸ್ವಿಗೊಳಿಸಿದ ಜಿಲ್ಲಾ ಖಜಾಂಚಿ ಮತ್ತು ಸಂಘದ ಪದಾಧಿಕಾರಿಗಳಿಗೆ ವಿಶೇಷವಾಗಿ ಅನಂತ ಅನಂತ ಧನ್ಯವಾದಗಳು

ರಜೆ ದಿನವನ್ನು ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳಾ ಮತ್ತು ಪುರುಷ ಪದಾಧಿಕಾರಿಗಳಿಗೆ  ಧನ್ಯವಾದಗಳು 

ಸಭೆಯಲ್ಲಿ ಭಾಗವಹಿಸಿ ಸಭೆಯ ಉದ್ಘಾಟನೆಯನ್ನು ಮಾಡಿ  ಅದ್ಬುತವಾದ ಪ್ರೇರಣೆ ನುಡಿಗಳೊಂದಿಗೆ ಮಾರ್ಗದರ್ಶನ ನೀಡಿ ನಮ್ಮೊಂದಿಗೆ ಸಂಪೂರ್ಣವಾಗಿ ಸಭೆಯ ಮುಕ್ತಾಯದವರೆಗೂ ಇದ್ದು ಯಶಸ್ವಿಗೆ ಕಾರಣ ಕಾರದ  ವಿಧಾನ ಪರಿಷತ್ತಿನ ಮಾನ್ಯ ನಿ.ಪೂ.ಶಾಸಕರಾದ ಶ್ರೀ ಅರುಣ ಶಹಾಪೂರ ರವರಗೆ ಕೃತಜ್ಞತೆಗೊಂದಿಗೆ ಧನ್ಯವಾಗಳು

ಸಭೆಯ ಉಸ್ತುವಾರಿ ವಹಿಸಿ ಯಶಸ್ವಿಯಾಗಿ ನೆರವೇರಿಸಿದ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ M.S, ಖಜಾಂಚಿ, ಸಂತೋಷ್ ಪಟ್ಟಣಶೆಟ್ಟಿ, ಹಾಗೂ ತಮ್ಮ ತಮ್ಮ ಜವಾಬ್ದಾರಿಯನ್ನು ಯಶಸ್ವಿಗೊಳಿಸಿದ  ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷೆ ಕವಿತ.ಬಿ.ಎ, ಉಪಾಧ್ಯಕ್ಷ ರಾಜಾರಾಮಶೆಟ್ಟಿ, ಕಾರ್ಯದರ್ಶಿ ತ್ಯಾಗಮ್ ಹರೇಕಳ, ಜಂಟಿ ಕಾರ್ಯದರ್ಶಿ, ಶೈಲಾ.ಎಸ್, ಸಂಘಟನಾ ಕಾರ್ಯದರ್ಶಿ  ಮನೋಹರ್ ಸೇರಿದಂತೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯ ಪೂರ್ವಕವಾಗಿ ಕೃತಜ್ಞತೆಗಳೊಂದಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಇಂದಿನ ಸಭೆಯಲ್ಲಿ ಕೆಲವು ಪದಾಧಿಕಾರಿಗಳು ಭಾಗವಹಿಸದಿರುವುದು ಒಂದು ಬೇಸರದ ಸಂಗತಿ ಇನ್ನೂ ಮುಂದೆ ಈ ರೀತಿ  ಮರುಕಳಿಸದಂತೆ ಸಂಬಂಧಿಸಿದವರು ಕ್ರಮವಹಿಸಲು ಸೂಚಿಸಿದೆ.

ಚೌಡಪ್ಪ ಎಸ್

ರಾಜ್ಯಾಧ್ಯಕ್ಷರು






















































































































































No comments:

Post a Comment

NEW UPDATES JOIN WITH KSSEDEA