ಆದಾಯ ತೆರಿಗೆ (Income Tax)

 

2024-25 INCOME TAX ANDROID APP
2024-25 INCOME TAX COMPUTER EXCEL SHEET
ಬಾಡಿಗೆ ಮನೆ ರಶೀದಿ ಕನ್ನಡ ಮತ್ತು ಇಂಗ್ಲಿಷ್
Note: Deductions about  income tax new and old regime and special for nps employees exemptions

ಮಾಹಿತಿಗಾಗಿ

ಈ ವರ್ಷದ ತೆರಿಗೆ ( ಟ್ಯಾಕ್ಸ್) ವಿಚಾರವಾಗಿ ನೀವು ತಿಳಿದುಕೊಂಡಿರಬೇಕಾದ ಕೆಲವು  ಅಂಶಗಳು : -ಈವರ್ಷ ಸುಮಾರು ಶೇ 95% ಜನ ಶಿಕ್ಷಕರು ತೆರಿಗೆಗೆ ಒಳಪಡುತ್ತಾರೆ.. ಏಕೆಂದರೆ ನಾವು ಎಲ್ಲರೂ 7ನೇ ವೇತನ ಪಡಿಯುತ್ತಿದ್ದು ಅದರ ಜೊತೆಗೆ ವಾರ್ಷಿಕ ಬಡ್ತಿ.ಕಾಲಮಿತಿ ಬಡ್ತಿ.  ಪಡೆದಿರುವುದರಿಂದ ತೆರಿಗೆಯನ್ನು ಭರಿಸಬೇಕಾಗುವದು

ಕಳೆದ  ವರ್ಷದ ಹಾಗೆ ಈ ವರ್ಷವೂ ಸಹ ಎರಡು ರೀತಿಯ ತೆರಿಗೆ ಲೆಕ್ಕಾಚಾರವಿದೆ.(Old regime.New regime)

New Tax Regime 

👉ಹೊಸ ತೆರಿಗೆಯಲ್ಲಿ ಯಾವದೇ ಉಳಿತಾಯ ಮಾಡಲು ಬರುವುದಿಲ್ಲ.

👉ಒಟ್ಟು ವೇತನ 7 ಲಕ್ಷ ಮತ್ತು 75000 Standard deduction=775000 ರೂ ಆದಾಯ  ಇದ್ದರೆ ತೆರಿಗೆ ಬರುವುದಿಲ್ಲ.

👉7.75000 ಕ್ಕಿಂತ ಅಧಿಕ ವೇತನ ಪಡೆಯುತ್ತಿದ್ದರೆ ಈ ಕೆಳಗಿನಂತೆ ಆದಾಯ ತೆರಿಗೆಗೆ ಒಳಪಡುತ್ತೀರಿ

👉೦-3 ಲಕ್ಷಕ್ಕೆ ತೆರಿಗೆ ಇಲ್ಲ

👉3-7 ಲಕ್ಷಕ್ಕೆ 5%. ಅಂದರೆ 20000 ರೂ.ತೆರಿಗೆ ಭರಿಸಬೇಕು.

👉7-10 ಲಕ್ಷಕ್ಕೆ 20000+10% (30000) =50000.ರೂ ತೆರಿಗೆ ಭರಿಸಬೇಕು

👉ತೆರಿಗೆ.10-12 ಲಕ್ಷಕ್ಕೆ 50000+ 15% ತೆರಿಗೆ (30000) = 80000 ರೂ ತೆರಿಗೆ ಭರಿಸಬೇಕು.

👉12-  15ಲಕ್ಷಕ್ಕೆ 80000ರೂ +20% ತೆರಿಗೆ (60000)  =140000 ರೂ ತೆರಿಗೆ ಭರಿಸಬೇಕು

Old Tax Regi‍me

🙏ಶಿಕ್ಷಕ ಬಂಧುಗಳ ಆದಾಯ ತೆರಿಗೆ ಲೆಕ್ಕಾಚಾರ ಸರಳಗೊಳಿಸಲು ಸೂಚನೆಗಳು:🙏

* ಇದರಲ್ಲಿ 5 ಲಕ್ಷ ಒಳಗಿನ ಆದಾಯಕ್ಕೆ ತೆರಿಗೆ ಬರುವದಿಲ್ಲ.

* 5-1೦ ಲಕ್ಷ ವರೆಗಿನ ಅದಾಯಕ್ಕೆ 125೦೦+20%(100000)= 112500 ತೆರಿಗೆ ಭರಿಸಬೇಕು

* 1೦ ಲಕ್ಷ  ಮೇಲ್ಪಟ್ಟ ಆದಾಯಕ್ಕೆ 112500+3೦% ರಷ್ಟು ಕಟ್ಟಬೇಕಾಗುವದು.

ಹಳೆ ಪದ್ದತಿಯಲ್ಲಿ ಉಳಿತಾಯ ಮಾಡಲು ಈ ಕೆಳಗಿನಂತಿವೆ

* 80C:- (ಈಗಾಗಲೇ ವೇತನದಲ್ಲೇ ಕಟಾವಣೆಗಳ ಒಟ್ಟು ಮೊತ್ತ ರೂ 1,50,000 ಮೀರಿದವರಿಗೆ ಈ ಕೆಳಗಿನವುಗಳು ಅನ್ವಯಿಸುವುದಿಲ್ಲ)

* 1) ಮಕ್ಕಳ ಟ್ಯೂಷನ್ ಫೀ ರಸೀದಿ

* 2) PLI ತುಂಬಿದ ದಾಖಲೆ

* 3) ಕೈಯಿಂದ ತುಂಬುವ      LIC ಕಂತು

* 4) NSC

* 5) ಸುಕನ್ಯಾ ಸಮೃದ್ಧಿ

* 6) ವಾಪಸ್ಸು ತುಂಬಿದ ಗೃಹ ಸಾಲದ ಅಸಲು

•   7) ಇತರೆ

* 80 ಸಿ ಅಡಿ ರೂ. 1,50,000 ಮೀರಿದ್ದರೂ ನೇರವಾಗಿ ಆದಾಯದಲ್ಲಿ ಕಟಾವಣೆಗೆ ಇರುವ ಅವಕಾಶಗಳು

* ಗೃಹ ಸಾಲದ ಬಡ್ಡಿ ತುಂಬುತ್ತಿರುವವರು ಬ್ಯಾಂಕ್ ನಿಂದ 'Provisional Interest Certificate' ಅಂತಾ ಕೇಳಿ (ಸ್ಟೇಟ್ ಮೆಂಟ್ ಅಂತಾ ಕೇಳಿ ತರಬೇಡಿರಿ) ಪಡೆದುಕೊಂಡು ಪೂರೈಸಿರಿ.

* 80 D:- ಆರೋಗ್ಯ ವಿಮೆ ಸ್ವಂತ ಹಾಗೂ ಅವಲಂಬಿತರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 25000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ.,

* 80 DD:- ವಿಕಲಚೇತನ ಅವಲಂಬಿತರ ವೈದ್ಯಕೀಯ ವೆಚ್ಚ ಅವಲಂಬಿತರು ವಿಕಲಚೇತನರಾಗಿದ್ದಲ್ಲಿ ಅವರ ವೈಕಲ್ಯ ಪ್ರಮಾಣ ಶೇ 40-79 ಇದ್ದಲ್ಲಿ ಗರಿಷ್ಠ ರೂ 75,000 ಅಥವಾ ಶೇ 80 ಕ್ಕಿಂತ ಹೆಚ್ಚಿದ್ದಲ್ಲಿ ಗರಿಷ್ಠ ರೂ 1,25,000 ಆದಾಯದಿಂದ ಕಳೆಯಲ್ಪಡುತ್ತದೆ.

* 80 DDB:- ನಿರ್ಧಾರಿತ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ವಿನಾಯಿತಿ ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ಧಾರಿತ ರೋಗಗಳಿಗೆ ಮಾಡುವ ವೆಚ್ಚಕ್ಕೆ ವಿನಾಯಿತಿ ನೀಡುತ್ತದೆ. ತಾವು ಅಥವಾ ತಮ್ಮಅವಲಂಬಿತರು ಅಂತಹ ರೋಗಗಳಿಗೆ ಚಿಕಿತ್ಸೆ ಪಡೆದಿದ್ದಲ್ಲಿ ರಸೀದಿಗಳು ಹಾಗೂ  ಹಾಗೂ ಎಂ.ಡಿ ಅಥವಾ ಎಂ.ಎಸ್ ಪದವಿ ಹೊಂದಿದ ವೈದ್ಯರಿಂದ '10 - I' ಪ್ರ.ಪತ್ರ ಪಡೆದು ಸಲ್ಲಿಸಬೇಕು. ಆ ನಿರ್ಧಾರಿತ ರೋಗಗಳ ಪಟ್ಟಿ ಈ ಕೆಳಗಿನಂತೆ ಇದೆ, ಇದನ್ನು ಸಕ್ಷಮ ವೈದ್ಯರೇ ನಿರ್ಧರಿಸಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಈ ಕೆಳಗಿನ ಚಿಕಿತ್ಸೆ ಗೆ ಮಾತ್ರ

* (i)   Neurological Diseases where the disability level has been certified to be of 40% and above,—

* (a)   Dementia ;

* (b)   Dystonia Musculorum Deformans ;

* (c)   Motor Neuron Disease ;

* (d)   Ataxia ;

* (e)   Chorea ;

* (f)   Hemiballismus ;

* (g)   Aphasia ;

* (h)   Parkinsons Disease ;

* (ii)   Malignant Cancers ;

* (iii)   Full Blown Acquired Immuno-Deficiency Syndrome (AIDS) ;

* (iv)   Chronic Renal failure ;

* (v)   Hematological disorders :

* (i)   Hemophilia ;

* (ii)   Thalassaemia.

* 80 CCD 1(B):- NPS ಗೆ ಹೆಚ್ಚುವರಿಯಾಗಿ ಸಂದಾಯ ಮಾಡಿದ ಮೊತ್ತ. ವೇತನದಲ್ಲಿ ಕಟಾವಣೆಯಾಗುವ ಮೊತ್ತವಲ್ಲದೇ ಎನ್.ಪಿ.ಎಸ್ ಗೆ ಹೆಚ್ಚುವರಿಯಾಗಿ ಹಣ ತುಂಬಿದ್ದರೆ ಗರಿಷ್ಠ ರೂ 50000 ವರೆಗೆ ವಿನಾಯಿತಿ ಇದೆ.

* 80 E:- ಶಿಕ್ಷಣ ಸಾಲದ ಬಡ್ಡಿ ನೌಕರನು ತನ್ನ ಹಾಗೂ ಅವಲಂಬಿತರ ಶಿಕ್ಷಣ ಸಾಲದ ಬಡ್ಡಿ ತುಂಬಿದ್ದರೆ ಅದಕ್ಕೆ ವಿನಾಯಿತಿ ಸಿಗುತ್ತದೆ. 

* 80 G:- ದೇಣಿಗೆ/ದಾನ ಕ್ಕೆ ವಿನಾಯಿತಿ. ಆದಾಯ  ಇಲಾಖೆಯಲ್ಲಿ 80ಜಿ ಅಡಿ ನೋಂದಣಿ ಮಾಡಿಕೊಂಡು ಚಾಲ್ತಿ ಪ್ರಮಾಣಪತ್ರ ಹೊಂದಿರುವ ಟ್ರಸ್ಟ್ / ಸಂಸ್ಥೆಗಳಿಗೆ ದಾನ ನೀಡಿದ್ದರೆ ಗರಿಷ್ಟ ಒಟ್ಟು ವೇತನದ ಶೇ 10 ಕ್ಕೆ ವಿನಾಯಿತಿ ಸಿಗುತ್ತದೆ.

* ಸರಕಾರೇತರ ಟ್ರಸ್ಟ್ ಗಳಿಗೆ ನೀಡಿರುವ ದೇಣಿಗೆಯ ಶೇ 50 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.

* ಸರಕಾರಿ ನಿಧಿಗಳಾಗಿದ್ದಲ್ಲಿ ನೀಡಿರುವ ದೇಣಿಗೆಯ ಶೇ 100 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.  

*   ರೂ 2000 ಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಚೆಕ್/ಡಿ.ಡಿ/NEFT/RTGS ವಿಧಾನದ ಮುಖಾಂತರವೇ ಹಣ ಸಂದಾಯ ಮಾಡಿರಬೇಕಾಗುತ್ತದೆ* 

*  80 U:- ಸ್ವತಃ ನೌಕರನೇ ವಿಕಲಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಪೂರೈಸಿರಿ.

* HRA ಮನೆ ಬಾಡಿಗೆ ತೆಗೆದುಕೊಳ್ಳಬಹುದು.ಆದರೆ ಈ ವರ್ಷ ಹಳೆ ಪದ್ಧತಿಯಲ್ಲಿ ಹೆಚ್ಚು ತೆರಿಗೆ ಬರುವುದರಿಂದ ಹೆಚ್ಚಿನವರಿಗೆ ಮನೆ ಬಾಡಿಗೆ (HRA) ಉಪಯೋಗವಾಗುದಿಲ್ಲ.



4 comments:

NEW UPDATES JOIN WITH KSSEDEA